ಶ್ರೀ ಜೈಮಾತಾ ಕಂಬೈನ್ಸ್ ಒಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣ ಸಂಸ್ಥೆ ಆಗಿದೆ. 2003 ರಲ್ಲಿ ಸಿನಿಮಾ ನಿರ್ಮಾಣವನ್ನು ಪ್ರಾರಂಭ ಮಾಡಿತು ಮತ್ತು ಕಂಪನಿಯು 2010 ರಲ್ಲಿ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು. ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ.ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು. == ಸ್ಥಾಪನೆ == ಶ್ರೀ ಜಯಮಾತಾ ಕಂಬೈನ್ಸ್ 2003 ರಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಿತು. ಸಂಸ್ಥೆಯು 2010 ರಲ್ಲಿ ದೂರದರ್ಶನದಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು. ಪ್ರಕಾಶ್ ಜಯರಾಮ್ 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಸಿ.ಜಯರಾಮ್ ಅವರ ಪುತ್ರರಾಗಿದ್ದರು. ಲಂಡನ್ನಿಂದ ಎಂಬಿಎ ಪದವಿ ಪಡೆದು, ಕಾರ್ಪೊರೇಟ್ ಜಗತ್ತಿನಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು. ಅವರು ಆರಂಭದಲ್ಲಿ ಖುಷಿ ಚಿತ್ರವನ್ನು ನಿರ್ಮಿಸಲು ಹೊರಟರು, ಆದರೆ ಅಂತಿಮವಾಗಿ ಅದನ್ನು ಅವರೇ ನಿರ್ದೇಶಿಸಿದರು. ಖುಷಿ ಚಲನಚಿತ್ರವನ್ನು ಭರ್ಜರಿ ಯಶಸ್ಸನ್ನು ಕಂಡಿತು ಮತ್ತು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿತು. ರಿಷಿ, ಮಿಲನ, ವಂಶಿ ಮತ್ತು ತಾರಕ್ ಚಿತ್ರಗಳೊಂದಿಗೆ ಯಶಸ್ಸು ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಮುಂದುವರಿಯಿತು. ಮಿಲನ ಸುಮಾರು ೪೫೦ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕುಮಿ ಧಾರಾವಾಹಿ ಮೂಲಕ ದೂರದರ್ಶನ ನಿರ್ಮಾಣಕ್ಕೆ ಈ ಸಂಸ್ಥೆಯು ಕಾಲ್ಟಿತ್ತು. == ಕಂಪೆನಿಯ ಇತಿಹಾಸ == ಈ ಕಂಪನಿಯು ಶ್ರೀ ಸಿ.ಜಯರಾಮ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಸಪ್ತಸ್ವರ ಮೂವಿ ಮೇಕರ್ಸ್ ನ ವಿಸ್ತರಣೆಯಾಗಿದೆ. ಅವರು ಈ ಕೆಳಗಿನ ಚಿತ್ರಗಳನ್ನು ನಿರ್ಮಿಸಿದ್ದಾರೆ. == ನಿರ್ಮಾಣದ ಚಲನಚಿತ್ರಗಳು == == ನಿರ್ಮಾಣದ ಧಾರಾವಾಹಿಗಳು == == ಪ್ರಶಸ್ತಿಗಳು == ರಿಷಿ 2004-05: ಅತ್ಯುತ್ತಮ ನಿರ್ದೇಶಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್. ಮಿಲನಾ 2007: ಫಿಲ್ಮ್ ಫೇರ್ ಪ್ರಶಸ್ತಿಗಳು ದಕ್ಷಿಣ - ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಗಾಯಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ. ತಾರಕ್: ಫಿಲ್ಮ್ಫೇರ್ ಪ್ರಶಸ್ತಿಗಳು(2018) - ಅತ್ಯುತ್ತಮ ನಟ === ಸಾಧನೆಗಳು === ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಳು ವರ್ಷಗಳ ಪ್ರಸಾರವಾಗಿತ್ತು. ಕುಲವಧು ಐದು ವರ್ಷಗಳ ಪ್ರಸಾರವಾಗಿತ್ತು ​ == ಉಲ್ಲೇಖಗಳು == == ಬಾಹ್ಯಕೊಂಡಿಗಳು ==